1885-1955. ಪ್ರಸಿದ್ಧ ನಾಣ್ಯಶಾಸ್ತ್ರಜ್ಞ. == ಬದುಕು == ವಿದ್ಯಾಭ್ಯಾಸ ಎಡಿನ್ ಬರೊ ಲೀಪ್ ಜಿಗ್ ವಿಶ್ವವಿದ್ಯಾಲಯಗಳಲ್ಲಿ. 1902-47ರವರೆಗೆ ಬ್ರಿಟಿಷ್ ಮ್ಯೂಸಿಯಮ್ನಲ್ಲಿ ಅಧಿಕಾರಿಯಾಗಿದ್ದ. ಇದೇ ಅವಧಿಯಲ್ಲಿ ಲಂಡನ್ ವಿಶ್ವವಿದ್ಯಾಲಯದ ಕಾಲೇಜು ಮತ್ತು ಸ್ಕೂಲ್ ಆಫ್ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್ ನಲ್ಲಿ ಸಂಸ್ಕೃತದ ಪ್ರಾಚಾರ್ಯನಾಗಿದ್ದ. 1949-54ರ ಅವಧಿಯಲ್ಲಿ ರಾಯಲ್ ಆರ್ಕಿಯಲಾಜಿಕಲ್ ಇನ್ಸ್ಟಿಟ್ಯೂಟಿನ ಉಪಾಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ್ದಾನೆ. ಭಾರತದ ಪ್ರಾಚೀನ ಇತಿಹಾಸದಲ್ಲ್ಲೂ, ನಾಣ್ಯ ವಿಷಯದಲ್ಲೂ ವಿಶೇಷ ಪರಿಶ್ರಮವಿತ್ತು. == ಸಾಧನೆ == ಕ್ಯಾಟಲಾಗ್ ಆಫ್ ಗುಪ್ತ ಕಾಯಿನ್ಸ್,ಮಾರ್ಕ್ಡ್ ಪಂಚ್ ಮ ಕಾಯಿನ್ಸ್ - ಇವು ಆತನ ಪ್ರಮುಖ ಕೃತಿಗಳು. ಬ್ರಿಟಿಷ್ ಮ್ಯೂಸಿಯಮ್ನಲ್ಲಿರುವ ಭಾರತದ ನಾಣ್ಯಗಳ ಬಗ್ಗೆ ಒಂದು ಸುದೀರ್ಘ ಪುಸ್ತಕವನ್ನು ರಚಿಸಿದ್ದಾನೆ. ಇದಲ್ಲದೆ, ಇತರ ಗ್ರಂಥಗಳಲ್ಲಿ ಅಸ್ಸಾಮಿನ ಮತ್ತು ಮಾಲ್ಡೀವ್ ದ್ವೀಪದ ನಾಣ್ಯಗಳ ಬಗೆಗೂ ಮೌಲಿಕ ಪ್ರಬಂಧಗಳನ್ನು ಬರೆದಿದ್ದಾನೆ.